ಒಮ್ಮೆ ಕಿರುತೆರೆ ಧಾರಾವಾಹಿಯ ಚಿತ್ರೀಕರಣ ನಡೆಯುತ್ತಿತ್ತು. ಬುದ್ಧಿವಂತ ಡೈರೆಕ್ಟರು ಎಫೆಕ್ಟಿವ್ ಆಗಿ ಚಿತ್ರೀಕರಣ ಮಾಡುತ್ತಿದ್ದರು. ಅದೊಂದು ಶವ ಮೆರವಣಿಗೆಯ ಸಂದರ್ಭ ಕಡಿಮೆ ಅಂದ್ರೆ 2 ಕಂತುಗಳಿಗಾದರು ಈ ಸೀನು ಎಳೆಯಬೇಕೆಂದು ಅವ್ರು ಹಂತ ಹಂತವಾಗಿ ಚಿತ್ರೀಕರಣ ಮಾಡಲು ತೀರ್ಮಾನಿಸಿಬಿಟ್ರು. ಅವಾಗಲೇ ಸಿದ್ಧವಾಗಿಟ್ಟಿದ್ದ ಶವ ಪಟ್ಟಿಗೆಯೊಳಗೆ ಸತ್ತ ವ್ಯಕ್ತಿಯ ಪಾತ್ರದ ನಟನನ್ನು ಪರಿಣಾಮಕಾರಿಯಾಗಿ ಮನಕರಗುವಂತೆ ಮಲಗಿಸಲಾಯಿತು.
ಈಗ ಪ್ರತಿಯೊಬ್ಬರು ಶವ ಪೆಟ್ಟಿಗೆಯ ಬಳಿಗೆ ಬಂದು ಕಲ್ಲು ಕರಗುವಂತೆ ರೋಧಿಸೋ ಗಂಭೀರವಾದ ಸೀನು. ಶವಪೆಟ್ಟಿಯೊಳಗೆ ಮಲಗಿರೋ ನಟ ಮಲಗಿದಲ್ಲೇ ತುಸು ಎಡಕ್ಕೆ ಜರಗಿದ. 'ಕಟ್' ಎಂದ ನಿದರ್ೇಶಕ 'ಏಯ್ ನೀನು ಶವ ಅನ್ನೋದು ಗೊತ್ತಲ್ಲಾ?" ಅಂದ ಮಲಗಿದ ವ್ಯಕ್ತಿ 'ಗೊತ್ತು ಸಾರ್... ಸಾರಿ ಸಾರ್ ' ಅಂದ. ಪುನಃ ಚಿತ್ರೀಕರಣ ಪ್ರಾರಂಭ. ಶವಪೆಟ್ಟಿಗೆಯ ಒಳಗಿದ್ದವ ಮತ್ತೆ ಬಲಕ್ಕೆ ಹೊರಳಿದ. ನಿದರ್ೇಶಕ 'ಕಟ್' ಅಂದ. 'ಏಯ್... ಸುಮ್ನೆ ಬಿದ್ಕೊಳೋ ಮಗ್ನೆ' ನಿದರ್ೇಶಕನ ತಾಳ್ಮೆ ತಪ್ಪತೊಡಗಿತು. ಆತ 'ಆಯ್ತು ಸರ್' ಅಂದ. ಚಿತ್ರೀಕರಣ ಮತ್ತೆ ಆರಂಭ. ಶವ ಪೆಟ್ಟಿಗೆಯ ಸುತ್ತ ಸೇರಿದವರು ರೋಧಿಸುತ್ತಿದ್ದಂತೆ. ಅದರೊಳಗೆ ಮಲಗಿದಾತ ಮೆಲ್ಲ ಎದೆ- ಸೊಂಟ ಮೇಲೆತ್ತಿದ. 'ಎಲ್ರೂ ಕುಯ್ಯೋ ಮುರ್ಯೋ ಅಂತಾ ಕಣ್ಣೀರಿಡುವಾಗ ಶವಕ್ಕೆ ಜೀವ ಬರೋದೇ...?' ನಿದರ್ೇಶಕನ ತಾಳ್ಮೆ ಪೂರಾ ತಪ್ಪಿ ಹೋಯಿತು. 'ನಿಂಗೆ ಶವದಂತೆ ಮಲಗೋದಕ್ಕೇ ಬರೋಲ್ಲ ನಟನೆ ಮಾಡ್ತೇನೆ ದೊಡ್ಡ ಸ್ಟಾರ್ ಆಗ್ತೇನೆ ಅಂತ ಬಂದಿದ್ಯಲ್ಲಾ ನಾಚ್ಕೆ ಆಗೋಲ್ಲಾ ನಿಂಗೆ. ಎದ್ದೇಳೋ ಮೇಲೆ...' ಎಂದು ಅರಚುತ್ತಾ ಆತನನ್ನು ಶವ ಪಟ್ಟಿಗೆಯಿಂದ ಎಳೆದು ಎಬ್ಬಿಸಿದ.
'ಸಾರ್... ಸಾರ್.. ಹಾಗಲ್ಲಾ ಸಾರ್...' ಅಂತ ಆತ ಅಂಗಲಾಚುತ್ತಿದ್ದಂತೆ ಇನ್ನೊಬ್ಬನಿಗೆ ಶವದ ಬಟ್ಟೆ ತೊಡಿಸಿ ಶವದ ಪೆಟ್ಟಿಗೆಯೊಳಗೆ ಮುಸುಕು ಹಾಕಿ ಮಲಗಿಸಲಾಯಿತು. ಮತ್ತೆ ಚಿತ್ರೀಕರಣ ಆರಂಭ... ಆ ಎರಡನೇ ವ್ಯಕ್ತಿಯೂ ಶವಪೆಟ್ಟಿಗೆಯೊಳಗೆ ನೆಟ್ಟಗೆ ಮಲಗದೆ ಅತ್ತಿತ್ತ ಹೊರಳಾಡಬೇಕೇ... ನಿದರ್ೇಶಕ ತಲೆ ಮೇಲೆ ಕೈ ಹೊತ್ತು ಕುಳಿತು ಬಿಟ್ಟ. 'ಸಾರ್ ಇದರೊಳಗೆ ಹೊಡೆದ ಮೊಳೆ ಮೈಗೆ ಚಚ್ಚುತ್ತಾ ಇದೆ ಸರಿಯಾಗಿ ಮಲಗೋಕೆ ಆಗ್ತಾ ಇಲ್ಲ...' ಅಂದ ಎರಡನೇ ಬಾರಿ ಶವ ಪೆಟ್ಟಿಗೆಯೊಳಗೆ ಮಲಗಿದ ವ್ಯಕ್ತಿ.
'ಓ ಹಂಗಾ... ಯಾರ್ರೀ ಈ ಶವ ಪೆಟ್ಟಿಗೇನ ಮಾಡಿದೋನು? ಅವ್ನಿಗೆ ಫೋನ್ ಹಚ್ಚಿರೀ' ನಿದರ್ೇಶಕ ಕೋಪದಿಂದ ಕುದಿಯುತ್ತಾ ನುಡಿದ. ಶವ ಪೆಟ್ಟಿಗೆ ಮಾಡ್ದೋನಿಗೆ ಫೋನ್ ಮಾಡಲಾಯಿತು. 'ಏನಪ್ಪಾ ನಿಂಗೆ ಚೂರೂ ಕಾಮನ್ ಸೆನ್ಸ್ ಇಲ್ವಾ... ಮತ್ತೆ ಶವ ಪೆಟ್ಟಿಗೆಯೊಳಗೆ ಮೈಗೆ ಚುಚ್ಚುವಂತೆ ಮೊಳೆ ಬಡಿದಿದ್ದಿಯಲ್ಲಾ.. ಬುದ್ದಿ ಗಿದ್ದಿ ಇದೆಯೇನಯ್ಯ ನಿಂಗೆ' ನಿದರ್ೇಶಕ ರೋಪು ಹಾಕಿದ.
ಅತ್ತ ಕಡೆಯಿಂದ ತಣ್ಣಗಿನ ಧ್ವನಿ 'ಹಂಗಾ ಸರ್. ನಾವು ಇಪ್ಪತ್ತೈದು ವರ್ಷದಿಂದ ಶವ ಪೆಟ್ಟಿಗೆ ಮಾಡ್ತಾ ಇದ್ದೇವೆ. ಇಷ್ಟರವರೇಗೆ ಯಾವ ಶವಾನೂ ಈ ರೀತಿ ಅಂದಿಲ್ಲ. ಇದು ನಮ್ಗೆ ಫಸ್ಟ್ ಕಂಪ್ಲೇಂಟು. ಶವ ಪೆಟ್ಟಿಗೆಯೊಳಗೆ ಶವವನ್ನು ಹಾಕುತ್ತಾರೇ ಹೊರ್ತು ಜೀವಂತ ಮನುಷ್ಯರನ್ನು ಯಾರೂ ಹಾಕಲ್ಲ. ನಿಮ್ಮ ಮನುಷ್ಯ ಸತ್ತಿಲ್ಲ ಆತನ್ನ ಸ್ಮಶಾನಕ್ಕೆ ಸಾಗಿಸಬೇಡಿ ಸಾರ್ ಆಸ್ಪತ್ರೆಗೆ ಅಡ್ಮಿಟ್ ಮಾಡಿ' ಎನ್ನಬೇಕೇ?
�
Thursday, February 21, 2008
Subscribe to:
Post Comments (Atom)
1 comment:
kathe ishta aaytu..
Post a Comment